ಭಾರತದ ಸಂವಿಧಾನ;ಕಿರು ಲೇಖನ. ಭಾರತಾಂಬೆಯ ಸರ್ವ ಪ್ರಾಂಜಲ ಮನಸುಗಳಿಗೆ ನಿಮ್ಮ ಶಿವಾನಂದ ಬಿಬಿ,ಶಿಕ್ಷಕರು,ಕೂಡ್ಲಿಗಿಯ ನಮಸ್ಕಾರಗಳು. ಬುದ್ಧಿಬಲದಲ್ಲಿ ಭೀಮಸೇನನೇ ಆಗಿರುವ ಡಾ||ಬಾಬಾ ಸಾಹೇಬ್ ಅಂಬೇಡ್ಕರ್‌ರನ್ನು ಎನ್ಮ ಹೃನ್ಮನಗಳಲ್ಲಿ ಸ್ಮರಿಸುತ್ತಾ, ನಮ್ಮ ದೇಶದ ಕೀರ್ತಿಗರಿಮೆಯಾದ ಸಂವಿಧಾನದ ಕುರಿತು ನನ್ನ ನಲ್ನುಡಿಗಳನ್ನು ನಿಮ್ಮುಡಿಗೆ ಅರ್ಪಿಸುತ್ತಿದ್ದೇನೆ. "ಮೇರಾ ಭಾರತ್ ಮಹಾನ್;ಕ್ಯೋಂಕಿ ಹಮಾರ ಸಂವಿಧಾನ್ ಸರ್ವ ಸಮ್ಮಾನ್", ಎಂಬುವಂತೆ ಇಡೀ ಜಗತ್ತೇ ಬೆರಗುಗಣ್ಣುಗಳಿಂದ ನೋಡುವ,ಅನೇಕ ದೇಶಗಳು ಅಳವಡೊಸಿಕೊಳ್ಳಲು ಪ್ರೇರೇಪಿಸುವ, ಪ್ರತಿ ಭಾರತೀನ ಸ್ಥಾನ-ಮಾನ-ಆತ್ಮಗೌರವಗಳನ್ನು ಕಾಪಿಡುವ,ಧರ್ಮಗ್ರಥಗಳಿಗೂ ಮಿಗಿಲಾದಸಮಾನತೆ ಸಾರುವ ಗ್ರಂಥವೇ ನಮ್ಮ ಸಂವಿಧಾನ. ನಾನಿಂದು ಇಷ್ಟು ನಿರ್ಬಿಡೆಯಿಂದ ನನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಲು,ಮನಬಯಸಿದಂತೆ ಜೀವಿಸಲು,ಇಷ್ಟದ ವೃತ್ತಿ ಮಾಡಲು,ಇಚ್ಚೆಯ ಸ್ಥಳದಲ್ಲಿ ವಾಸಿಸಲು ಸಾಧ್ಯವಾಗಿರುವುದೇ ನಮ್ಮ ಸಂವಿಧಾನದ ಶ್ರೀರಕ್ಷೆಯಿಂದ. ಇದು ಕೇವಲ ನನಗೊಬ್ಬನಿಗೆ ಸಿಕ್ಕ ಸವಲತ್ತಲ್ಲ, 134 ಕೋಟಿಗೂ ಮಿಗಿಲಾದ ಭಾರತೀಯರಿಗೆ ಜನ್ಮದತ್ತವಾಗಿ ಸಿಕ್ಕ ಸಂವಿಧಾನ ಪ್ರದತ್ತ ವರ. ಪ್ರಸ್ತಾವನೆಯು ಸಂವಿಧಾನದ ಹೃದಯ.ಏಕೆಂದರೆ ಕೇವಲ ಪ್ರಸ್ತಾವನೆಯ ಆಚರಣೆ ಮಾತ್ರದಿಂದಲೇ ನಾವು ಶ್ರೇಷ್ಠನಾಗರಿಕರಾಗಬಹುದು.ದೇಶವಾಸಿಗಳೆಲ...