ನಮ್ಮ ಸಂವಿಧಾನ
ಭಾರತದ ಸಂವಿಧಾನ;ಕಿರು ಲೇಖನ.
ಭಾರತಾಂಬೆಯ ಸರ್ವ ಪ್ರಾಂಜಲ ಮನಸುಗಳಿಗೆ ನಿಮ್ಮ ಶಿವಾನಂದ ಬಿಬಿ,ಶಿಕ್ಷಕರು,ಕೂಡ್ಲಿಗಿಯ ನಮಸ್ಕಾರಗಳು.
ಬುದ್ಧಿಬಲದಲ್ಲಿ ಭೀಮಸೇನನೇ ಆಗಿರುವ ಡಾ||ಬಾಬಾ ಸಾಹೇಬ್ ಅಂಬೇಡ್ಕರ್‌ರನ್ನು ಎನ್ಮ ಹೃನ್ಮನಗಳಲ್ಲಿ ಸ್ಮರಿಸುತ್ತಾ, ನಮ್ಮ ದೇಶದ ಕೀರ್ತಿಗರಿಮೆಯಾದ ಸಂವಿಧಾನದ ಕುರಿತು ನನ್ನ ನಲ್ನುಡಿಗಳನ್ನು ನಿಮ್ಮುಡಿಗೆ ಅರ್ಪಿಸುತ್ತಿದ್ದೇನೆ.
"ಮೇರಾ ಭಾರತ್ ಮಹಾನ್;ಕ್ಯೋಂಕಿ ಹಮಾರ ಸಂವಿಧಾನ್ ಸರ್ವ ಸಮ್ಮಾನ್", ಎಂಬುವಂತೆ ಇಡೀ ಜಗತ್ತೇ ಬೆರಗುಗಣ್ಣುಗಳಿಂದ ನೋಡುವ,ಅನೇಕ ದೇಶಗಳು ಅಳವಡೊಸಿಕೊಳ್ಳಲು ಪ್ರೇರೇಪಿಸುವ, ಪ್ರತಿ ಭಾರತೀನ ಸ್ಥಾನ-ಮಾನ-ಆತ್ಮಗೌರವಗಳನ್ನು ಕಾಪಿಡುವ,ಧರ್ಮಗ್ರಥಗಳಿಗೂ ಮಿಗಿಲಾದಸಮಾನತೆ ಸಾರುವ ಗ್ರಂಥವೇ ನಮ್ಮ ಸಂವಿಧಾನ.
ನಾನಿಂದು ಇಷ್ಟು ನಿರ್ಬಿಡೆಯಿಂದ ನನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಲು,ಮನಬಯಸಿದಂತೆ ಜೀವಿಸಲು,ಇಷ್ಟದ ವೃತ್ತಿ ಮಾಡಲು,ಇಚ್ಚೆಯ ಸ್ಥಳದಲ್ಲಿ ವಾಸಿಸಲು ಸಾಧ್ಯವಾಗಿರುವುದೇ ನಮ್ಮ ಸಂವಿಧಾನದ ಶ್ರೀರಕ್ಷೆಯಿಂದ. ಇದು ಕೇವಲ ನನಗೊಬ್ಬನಿಗೆ ಸಿಕ್ಕ ಸವಲತ್ತಲ್ಲ, 134 ಕೋಟಿಗೂ ಮಿಗಿಲಾದ ಭಾರತೀಯರಿಗೆ ಜನ್ಮದತ್ತವಾಗಿ ಸಿಕ್ಕ ಸಂವಿಧಾನ ಪ್ರದತ್ತ ವರ.
ಪ್ರಸ್ತಾವನೆಯು ಸಂವಿಧಾನದ ಹೃದಯ.ಏಕೆಂದರೆ ಕೇವಲ ಪ್ರಸ್ತಾವನೆಯ ಆಚರಣೆ ಮಾತ್ರದಿಂದಲೇ ನಾವು ಶ್ರೇಷ್ಠನಾಗರಿಕರಾಗಬಹುದು.ದೇಶವಾಸಿಗಳೆಲ್ಲರೂ-ಎಲ್ಲರಿಗೂ ಸಮಾನ ನ್ಯಾಯ-ಸಮಾನತೆ-ಸ್ವಾತಂತ್ರ್ಯ-ಸಹೋದರತೆಗಳನ್ನು ಕೊಡು-ಕೊಳ್ಳುವುದಾಗಿ ನಾವು ಪ್ರತಿಜ್ಞೆ ಮಾಡಿ ನಮಗೆ ನಾವೇ ಸಂವಿಧಾನವನ್ನಿ ಅರ್ಪಿಸಿಕೊಳ್ಳುವಂತೆ ರೂಪಿಸಲಾಗಿದೆ!
ಪ್ರತಿಯೊಬ್ಬರಿಗೂ ಷಡ್ಭಾಗ್ಯಗಳಾದ ಸಮಾನತೆಯ ಹಕ್ಕು,ಸ್ವಾತಂತ್ರ್ಯ ಹಕ್ಕು,ಶೋಷಣೆಯ ವಿರುದ್ಧದ ಹಕ್ಕು, ಸಾಂಸ್ಕೃತಿಕ-ಶೈಕ್ಷಣಿಕ ಹಕ್ಕು, ಧಾರ್ಮಿಕ ಉಪಾಸನೆಯ ಹಕ್ಕು ಮತ್ತು ಸಂವಿಧಾನ ಬದ್ಧ ಪರಿಹಾರದ ಹಕ್ಕುಗಳನ್ನು ನೀಡುವುದರ ಮೂಲಕ ಸಂವಿಧಾನವು ಶತಕೋಟಿಗೂ ಮಿಗಿಲಾದ ಧಮನಿತರನ್ನು ಮೇಲೆತ್ತುವ ಎಲ್ಲಾ ಅವಕಾಶಗಳನ್ನು ಒದಗಿಸಿದೆ.
"ಜಗತ್ತಿಗೆ ಸೂರ್ಯನ ಹೊರತಾಗಿ ನೀಡಬಹುದಾದ ಶ್ರೇಷ್ಠ ಬೆಳಕೆಂದರೆ ಅದು ಜ್ಞಾನ, ಅಂದರೆ ಶಿಕ್ಷಣ", ಪ್ರತಿಯೊಬ್ಬರಿಗೂ ಶಿಕ್ಷಣ ಒದಗಿಸಲು ಸಂವಿಧಾನದ 45 ನೇ ವಿಧಿಯು ಒತ್ತು ನೀಡಿದೆ.ಶಿಕ್ಷಣವನ್ನು ಉಚಿತ ಮತ್ತು ಸಾರ್ವತ್ರೀಕರಣಗೊಳಿಸಲು ನಿರ್ದೇಶಿಸಿದೆ. ಆದರೆ ಆಡಳಿತ ಯಂತ್ರದ ಇಚ್ಛಾಶಕ್ತಿಯ ಕೊರತೆಯಿಂದ ಸಾಧ್ಯವಾಗಿರಲಿಲ್ಲ. ಮುಂದುವರೆದು 2009 ರಲ್ಲಿ 21(a)ರಡಿಯಲ್ಲಿ ಶಿಕ್ಷಣ ಹಕ್ಕು ಕಾಯಿದೆ ಸೃಷ್ಟಿಸಿ ಶಿಕ್ಷಣವು ಮೂಲಭೂತ ಹಕ್ಕೆಂದು ಘೋಷಿಸಿ-ಪೋಷಿಸುತ್ತಿದೆ.
467 ವಿಧಿಗಳು,25 ಭಾಗಗಳು,12 ಅನುಸೂಚಿಗಳನ್ನು ಹೊಂದಿರುವ ನಮ್ಮ ಸಂವಿಧಾನವು ಕೇವಲ ವಿಧಿಗಳ ಸಂಖ್ಯೆಇಂಸ ಬೃಹತ್ತಾಗಿರದೆ, ಆಶಯ ಮತ್ತು ಬದ್ಧತೆಗಳಿಂದ ಅಗಾಧತೆಯನ್ನು ಸಂಪಾದಿಸಿದೆ.
ಶ್ರೀ ಕೃಷ್ಣನ ಉವಾಚದಂತೆ " ಯಾರು ತನ್ನನ್ನು ಸುಧಾರಣೆಗೆ ಮುಕ್ತವಾಗಿಟ್ಟುಕೊಳ್ಳುವನೋ,ಅವನು ಉತ್ಕೃಷ್ಟನಾಗಿ ಯಶಸ್ಸಿನ ಉತ್ತುಂಗದಲ್ಲಿರುತ್ತಾನೆ. ಅಂತೆಯೇ ನಮ್ಯ ಗುಣವುಳ್ಳ ಸಂವಿಧಾನವು ಇಂದಿಗೆ 118 ತಿದ್ದುಪಡಿಗಳಿಗೆ ತೆರೆದುಕೊಂಡು, ಮೂಲ ಸಂವಿಧಾನಕ್ಕಿಂತಲೂ ಶ್ರೇಷ್ಠತಮವಾಗಿದೆ.
ಆದರೆ ಪ್ರಸ್ತುತ ದಿನಗಳಲ್ಲಿ ಹಲವು ಹೊಣೆಗೇಡಿಗಳು ಕೇವಲ ಹಕ್ಕಿಗಾಗಿ ಹಾತೊರೆಯುತ್ತಾ, 51(ಎ) ನಲ್ಲಿನ ಮೂಲಭೂತ ಕರ್ತವ್ಯಗಳನ್ನು ಮರೆತು ಬಾಲಿಶವಾಗಿ ವರ್ತಿಸುತ್ತಿದ್ದಾರೆ. ಇನ್ನೂ ಕೆಲವರು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಅದನ್ನು ತಿರುಚುವ ಪ್ರಯತ್ನಿಸುತ್ತಿದ್ದಾರೆ. ಇದನ್ನು ಧಮನಿಸಬೇಕಿದೆ ಮತ್ತು ಇದು ಶಿಕ್ಷಣದಿಂದ ಮಾತ್ರ ಸಾಧ್ಯ. ಎಲ್ಲರಿಗೂ ಸಂವಿಧಾನ ಸಾಕ್ಷರತೆ ಜರೂರಿದೆ ಮತ್ತಿದು ಆಗಲೇಬೇಕಿದೆ.
ನಮ್ಮ ಸಂವಿಧಾನ ನಮ್ಮ ಹೆಮ್ಮೆ
ಅದರ ಅನುಪಾಲನೆ ನಮ್ಮ ದುಡಿಮೆ
ಸಂವಿಧಾನದ ರಕ್ಷಣೆಯೇ ನಮ್ಮ ಗರಿಮೆ..
ಎಂದು ಹೇಳುತ್ತಾ ಆಲಿಸುವ ಸೈರಣಿ ತೋರಿದ ತೀರ್ಪುಗಾರರಿಗೂ, ಅವಕಾಶ ನೀಡಿದ ಸಂಘಟಕರಿಗೂ ಧನ್ಯವಾದಗಳು,
ಜೈ ಭಾರತ್.
🖊 ಶಿವಾನಂದ ಬಿಬಿ
ಶಿಕ್ಷಕರು ಕೂಡ್ಲಿಗಿ
ಮೊ.9591749094
Comments
Post a Comment