ಶಿಕ್ಷಕರ ಕಲ್ಯಾಣ ನಿಧಿಯ ಆನ್ಲೈನ್ ಸೇವೆಗಳು
ಶಿಕ್ಷಕರ ಕಲ್ಯಾಣ ನಿಧಿಯು ತನ್ನ ಸೇವೆಗಳನ್ನು ಆನ್ಲೈನ್ ಮೂಲಕ ನೀಡಲು ಚಾಲನೆ ನೀಡಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು, ಮಾನ್ಯ ಉಪನಿರ್ದೇಶಕರು ಹಾಗೂ ಸಚಿವರಿಗೆ ಮನವಿ ಮಾಡಿದ ಪ್ರಯುಕ್ತ ಇದೀಗ ಶಿಕ್ಷಕರ ಕಲ್ಯಾಣ ನಿಧಿಯು ತನ್ನ ಸೇವೆಗಳನ್ನು ಆನ್ಲೈನ್ ಮೂಲಕ ನೀಡಲು ಸಿದ್ಧವಾಗಿದೆ.
ಆನ್ಲೈನ್ ನಲ್ಲಿ ದೊರಕುವ ಸೇವೆಗಳು.
೧.ಆಜೀವ ಸದಸ್ಯತ್ವಕ್ಕೆ ನೋಂದಣಿ.
೨. ಶಿಕ್ಷಕರ ವೈದ್ಯಕೀಯ ವೆಚ್ಚ ಮರುಪಾವತಿ.
೩.ವಿದ್ಯಾರ್ಥಿಗಳ ವೈದ್ಯಕೀಯ ವೆಚ್ಚ ಮರುಪಾವತಿ.
೪.ವಿದ್ಯಾರ್ಥಿಗಳ ಮೆರಿಟ್ ವಿದ್ಯಾರ್ಥಿವೇತನ
೫. ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹ ಧನ
೬. ಶಿಕ್ಷಕರ ಸದನದ ಕೊಠಡಿ ಮತ್ತು ವಸತಿ ಸೌಲಭ್ಯ.
೭.SWF/TWF ಗೆ ಸಂಸ್ಥೆಯನ್ನು ನೋಂದಾಯಿಸಿಕೊಳ್ಳುವುದು.
ಈ ಎಲ್ಲಾ ಸೇವೆಗಳನ್ನು ಪಡೆಯಲು ಪ್ರಥಮವಾಗಿ ಆನ್ಲೈನ್ ನಲ್ಲಿ ಪ್ರತಿ ಶಿಕ್ಷಕರು ನೋಂದಾಯಿಸಿಕೊಳ್ಳಬೇಕು.
ಈಗಾಗಲೇ ಆಜೀವ ಸದಸ್ಯತ್ವವನ್ನು ಹೊಮನದಿರುವವರು ತಮ್ಮ ಆಜೀವ ಸದಸ್ಯತ್ವ ಸಂಖ್ಯೆ ಬಳಸಿ ಮಾಹಿತಿಯನ್ನುUpdate ಇಂದೀಕರಿಸಬೇಕು.
ಇದುವರೆಗೂ ಆಜೀವ ಸದಸ್ಯತ್ವವನ್ನು ಪಡೆಯದೇ ಇರುವವರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ವಿವರಗಳಿಗೆ ಕೆಳಗಿನ ಲಿಂಕ್ ಒತ್ತಿ.
Comments
Post a Comment