Posts

Showing posts from August, 2020

ನಿಜವಾದ ಕಲಿಕಾ ಸಂಪನ್ಮೂಲ.

 ಕಲಿಕೆಯ ಪ್ರಕ್ರಿಯೆಯಲ್ಲಿ ಸಂಪನ್ಮೂಲಗಳ  ಅರ್ಥ, ಮಹತ್ವ ಮತ್ತು ಕಲಿಕೆಯಲ್ಲಿ ಅವುಗಳ ಸ್ಥಾನಮಾನ   (ಪೂರಕ ಅಥವಾ ಸಹಾಯಕ ಸಂಪನ್ಮೂಲ ಎನ್ನುವ ವಿಚಾರದ ಸತ್ಯಾಸತ್ಯತೆ. ಹಾಗಾದರೆ ಮುಖ್ಯವಾದುದು ಯಾವುದು?    ಭಾಷೆ ಮತ್ತು ಸಮಾಜ ವಿಜ್ಞಾನ ಕಲಿಕೆಗೆ ಸಂಪನ್ಮೂಲ ಎಲ್ಲಿವೆ?) *** ನಿಜವಾದ ಸಂಪತ್ತು ವಸ್ತುವಿನಲ್ಲಿ ಇಲ್ಲ; ಅದರ ಬಗೆಗೆ ತಿಳಿವಳಿಕೆ ಪಡೆದಿರುವ ಮನುಷ್ಯನಲ್ಲಿದೆ. ಹೀಗಾಗಿ ನಿಜ ಸಂಪನ್ಮೂಲ ಮನುಷ್ಯನೇ – ನಮ್ಮ ಸಂದರ್ಭದಲ್ಲಿ- ಕಲಿಯುವವರೇ!  *** ಎಲ್ಲರಿಗೂ ನಮಸ್ಕಾರಗಳು. ನಮ್ಮ ಇಂದಿನ ಸಂವಾದಕ್ಕೆ ಒಂದು ತಾತ್ವಿಕ ನೆಲಗಟ್ಟು ಒದಗಿಸಿ ಅದಕ್ಕೆ ಒಂದು ದಿಕ್ಕು ತೋರಬಲ್ಲದು ಎಂದು ನಾನು ಅಂದುಕೊಂಡಿರುವ ಒಂದು ವಚನ ಹಾಡುವುದರೊಂದಿಗೆ ನಮ್ಮ ನಿಮ್ಮ ಮಾತುಕತೆ ಆರಂಭಿಸೋಣ:   ‘ತಾಳಮಾನ ಸರಿಸಮನರಿಯೇ ; ಓಜೆ ಬಜಾವಣೆಯ ಲೆಕ್ಕವನರಿಯೇ ; ಅಮೃತಗಣ ದೇವಗಣವನರಿಯೇ ಕೂಡಲಸಂಗಮ ದೇವ ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ’ ‘ಆನು ಒಲಿದಂತೆ ಹಾಡುವ ಸ್ವಾತಂತ್ರ್ಯ’ದ ಸುಖವನ್ನು ತಲೆ ಮೇಲಿಟ್ಟು ಮೆರೆಸುವ ಆಶಯ ಬಹಳ ಮಹತ್ವದ್ದು.   ನಾವು ಏನೂ ಆಗಿರಬಹುದು, ಗಂಡಸಾಗಿರಬಹುದು, ಹೆಂಗಸಾಗಿರಬಹುದು, ಶಿಕ್ಷಕರಾಗಿರಬಹುದು, ಅಧಿಕಾರಿಯಾಗಿರಬಹುದು, ರೈತನಾಗಿರಬಹುದು, ರಾಜಕಾರಣಿಯಾಗಿರಬಹುದು, ಕೂಲಿಕಾರ್ಮಿಕನಾಗಿರಬಹುದು, ಒಡೆಯನಾಗಿರಬಹುದು, ಶಿಕ್ಷಕರೂ ಆಗಿದ್ದಿರಬಹುದು... ಏನೇ ಆಗಿದ್ದರೂ ನಾವ...

ನಮ್ಮ ಸಂವಿಧಾನ

 ಭಾರತದ ಸಂವಿಧಾನ;ಕಿರು ಲೇಖನ. ಭಾರತಾಂಬೆಯ ಸರ್ವ ಪ್ರಾಂಜಲ ಮನಸುಗಳಿಗೆ ನಿಮ್ಮ ಶಿವಾನಂದ ಬಿಬಿ,ಶಿಕ್ಷಕರು,ಕೂಡ್ಲಿಗಿಯ ನಮಸ್ಕಾರಗಳು.      ಬುದ್ಧಿಬಲದಲ್ಲಿ ಭೀಮಸೇನನೇ ಆಗಿರುವ ಡಾ||ಬಾಬಾ ಸಾಹೇಬ್ ಅಂಬೇಡ್ಕರ್‌ರನ್ನು ಎನ್ಮ ಹೃನ್ಮನಗಳಲ್ಲಿ ಸ್ಮರಿಸುತ್ತಾ, ನಮ್ಮ ದೇಶದ ಕೀರ್ತಿಗರಿಮೆಯಾದ ಸಂವಿಧಾನದ ಕುರಿತು ನನ್ನ ನಲ್ನುಡಿಗಳನ್ನು ನಿಮ್ಮುಡಿಗೆ ಅರ್ಪಿಸುತ್ತಿದ್ದೇನೆ.       "ಮೇರಾ ಭಾರತ್ ಮಹಾನ್;ಕ್ಯೋಂಕಿ ಹಮಾರ ಸಂವಿಧಾನ್ ಸರ್ವ ಸಮ್ಮಾನ್", ಎಂಬುವಂತೆ ಇಡೀ ಜಗತ್ತೇ ಬೆರಗುಗಣ್ಣುಗಳಿಂದ ನೋಡುವ,ಅನೇಕ ದೇಶಗಳು ಅಳವಡೊಸಿಕೊಳ್ಳಲು ಪ್ರೇರೇಪಿಸುವ, ಪ್ರತಿ ಭಾರತೀನ ಸ್ಥಾನ-ಮಾನ-ಆತ್ಮಗೌರವಗಳನ್ನು ಕಾಪಿಡುವ,ಧರ್ಮಗ್ರಥಗಳಿಗೂ ಮಿಗಿಲಾದಸಮಾನತೆ ಸಾರುವ ಗ್ರಂಥವೇ ನಮ್ಮ ಸಂವಿಧಾನ.         ನಾನಿಂದು ಇಷ್ಟು ನಿರ್ಬಿಡೆಯಿಂದ ನನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಲು,ಮನಬಯಸಿದಂತೆ ಜೀವಿಸಲು,ಇಷ್ಟದ ವೃತ್ತಿ ಮಾಡಲು,ಇಚ್ಚೆಯ ಸ್ಥಳದಲ್ಲಿ ವಾಸಿಸಲು ಸಾಧ್ಯವಾಗಿರುವುದೇ ನಮ್ಮ ಸಂವಿಧಾನದ ಶ್ರೀರಕ್ಷೆಯಿಂದ. ಇದು ಕೇವಲ ನನಗೊಬ್ಬನಿಗೆ ಸಿಕ್ಕ ಸವಲತ್ತಲ್ಲ, 134 ಕೋಟಿಗೂ ಮಿಗಿಲಾದ ಭಾರತೀಯರಿಗೆ ಜನ್ಮದತ್ತವಾಗಿ ಸಿಕ್ಕ ಸಂವಿಧಾನ ಪ್ರದತ್ತ ವರ.     ಪ್ರಸ್ತಾವನೆಯು ಸಂವಿಧಾನದ ಹೃದಯ.ಏಕೆಂದರೆ ಕೇವಲ ಪ್ರಸ್ತಾವನೆಯ ಆಚರಣೆ ಮಾತ್ರದಿಂದಲೇ ನಾವು ಶ್ರೇಷ್ಠನಾಗರಿಕರಾಗಬಹುದು.ದೇಶವಾಸಿಗಳೆಲ...